ಕ್ಯಾ ಹೈ ಮೇರ ಜುಮ್ಮೆದಾರಿ

ನಾನು, ನನ್ನ ವಯಸ್ಸು ,ನನ್ನ ವಿದ್ಯಾಭ್ಯಾಸ ,ನಾನು ಮಾಡುತ್ತಿರುವ ಕೆಲಸ ,ಇದ್ಯಾವದಕ್ಕು ಸಂಬಂಧವೇ ಇಲ್ಲ.  ಕಾರಣ ನಾನು ಅಸಾಮಾನ್ಯ ವ್ಯಕ್ತಿಯೇ ಸರಿ. ಹೊತ್ತು ಗೊತ್ತುವಿಲ್ಲದೆ , ಹಿಂದೆ ಮುಂದೆ ವಿಚಾರಿಸದೆ ಇರುವವನಲ್ಲ. ಚಿಲ್ಲರೆ ಬುದ್ಧಿವುಳ್ಳ ಮನುಷ್ಯರ ವ್ಯಕ್ತಿತ್ವವನ್ನ ಅಳಿಯುವ ಅಸಾಮಾನ್ಯ ವ್ಯಕ್ತಿ ನಾನು. ನಾನು ನನ್ನ ಬಗ್ಗೆ ಅರಿತವನು ಪರರ ದದ್ದತನವನ್ನ ನೋಡಿ ಸಂತಸದ ಜೊತೆಯಲಿ ಮಂಕು ಬುದ್ಧಿವಂತಿಕೆಯ ನದತೆಯನು ಕಂಡು ಮುಗುಳುನಗುವವ ನಾನು. ಯಾರೆನೆಂದು ತಿಳಿಯದಷ್ಟು ದದ್ದನಲ್ಲ ನಾನು. ನಿಮ್ಮ ಬುದ್ಧಿವನ್ತಿಕೆಗಿಂಥ ಬುದ್ಧಿವಂತ ನಾನು. ವಿಚಾರವನ್ನ ಆಳಕ್ಕೆ ತೆಗೆದುಕೊಂಡು ಹೋಗಿ , ಉತ್ತರಾಭಿಮಿಖ ಉತ್ತರ ಕೊಡುವವ ನಾನು. ನಿಮ್ಮಿಂದ ಕೇಳಲು ನಾನು ತಯಾರಿಲ್ಲ. ನನಗೆ ಸಮಸ್ಯೆಗಳ ಅರಿವಿದೆ. ಪರಿಣಾಮಗಳ ಅರಿವು ಸಹ ಇದೆ. ಯಾರನ್ನು ಸಾಮನ್ಯಾರಂತೆ ಕಾಣಬೇಡಿ . ಎಲ್ಲರಲ್ಲೂ ಒಂದೊಂದು ಅದ್ಬುತವಾದಂಥ ಶಕ್ತಿಯಿದೆ, ಕಲೆಯಿದೆ, ವಿಷ್ಮಯವೇ ಅಡಗಿದೆ.

ಒಳ್ಳೆಯತನದಿಂದ ಒಳ್ಳೆಯದನ್ನ ಪಡೆಯಲು ಪ್ರಯತ್ನಿಸಿ. ಅನುಕೂಲಕರ ಸಂಬಂಧಗಳನ್ನ ಬೆಳಸಿರಿ.

ನುಡಿದಂತೆ ನಡೆದಲ್ಲಿ

ಸುಮಾರು ಫೋನ್ ಕರೆಗಳು ಬರುತ್ತಲಿರುತ್ತವೆ , ಮತ್ತೊಂದು ಕೆಲಸದ ಗುಂಗಲ್ಲಿ  ಆಯಿತು ಸಾರ್ ಹತ್ತು ನಿಮಿಷದಲ್ಲಿ ನಿಮಗೆ ನಾನೇ ಕರೆ ಮಾಡುವೆ  ಅಂತ ಹೇಳುವೆ ಆದರೆ ಅದೇನು ಖರ್ಮವೋ ಈ ಬಾಯಿ ನುಡಿದಂತೆ ಕೈ ಕೆಲಸ ಮಾಡುವಿದಿಲ್ಲವಲ್ಲ ಎನ್ನುವುದೇ ಬೇಜಾರು . ಒತ್ತಡದ ಸಂಧಿಗ್ಧ ಸ್ಥಿತಿಯಲ್ಲಿರುವ ಎಲ್ಲರೂ ಹೀಗೆಯೋ ಏನೋ ನಾ ಕಾಣೆ ಆದರೆ ನಾನಂತು  ಹೇಳಿದ ಕೆಲಸ ಒಮ್ಮೆಗೆ ಮಾಡಿದವನು ಅಲ್ಲವೇ ಅಲ್ಲ. ಎರಡು ಬಾರಿಯಾದರೂ ಪುನರಾವರ್ತನೆ ಆಗಲೇಬೇಕು . ಆಗಲೇ ಅದು ನನ್ನ ವಿಚಾರಕ್ಕೆ ಬರುವಂಥದ್ದು. ಏನಿದು ಈ ಥರ ವಿಚಿತ್ರ  ಅನಿಸುತ್ತೆ ನನಗೆ ಯಾಕೆ ಹೀಗೆಲ್ಲ ಆಗಬೇಕು , ಯಾಕೆ ಇಷ್ಟೊಂದು ಒತ್ತಡದ ಜೀವನ ? ಅಂತ ಅನಿಸಿಬಿಡುತ್ತೆ . 

            ಕುಟುಂಬದ ಸಾಲಗಳು, ನನ್ನ ಜವಾಬ್ದಾರಿತನ , ನನ್ನ ಮೇಲಿನ ಹೊಣೆಗಾರಿಕೆಗಳನ್ನ ಕಡಿಮೆ ಮಾಡಲು ನನಗೆ ಹಣದ ಅವಶ್ಯಕತೆ ತುಂಬಾನೇ ಇದೆ ಹಾಗಾಗಿ ಈ ಒತ್ತಡ ಜೀವನ ನನಗೆ ಬೇಕೇ ಬೇಕು ......

ಮುತ್ತಿನಂಥ ಮಾತೊಂದ ಗೊತ್ತ ನಿಮಗೆ ?

ಕಾಲ ಕಳದಂತೆ ಚಿಕ್ಕವರು ದೊಡ್ಡವರಾಗುತ್ತಾ ಬರ್ತಾರೆ ಅದೇ ದೊಡ್ಡವರು ವ್ರುದ್ಯಾಪ್ಯ ಜೀವನಕ್ಕೆ ಕಾಲಿಡುತ್ತಿರುತ್ತಾರೆ. ಸಮಯ ನನಗು ನಿಮಗೂ ಎಲ್ಲರಿಗು ಒಂದೇ ಆದರೆ ನಮ್ಮ ನಮ್ಮ ವಾತಾವರಣ ಹಾಗು ಚಟುವಟಿಕೆಯ ಮೇಲೆ ನಮ್ಮ ಸಮಸ್ಯೆಗಳು , ಸಂಬಂಧಗಳು , ಸ್ನೇಹಿತರ ಜೊತೆಯಲಿ ಜೀವನ ಸಾಗುತ್ತಲಿರುತ್ತೆ.

                   ನನಗೆ ಮನೆ ಕಟ್ಟಿಸಬೇಕು, ಕಾರಲ್ಲಿ ಓಡಾಡಬೇಕು , ನನ್ನ ತಂಗಿ , ತಮ್ಮ ಅಣ್ಣನ ಮದುವೆ  ಮಾಡಬೇಕು ನಾನು ಕೂಡ ಮದುವೆ ಆಗಬೇಕು , ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹಂಬಲ, ತುಡಿತ , ಮಿಡಿತ ಎಲ್ಲವು ಇದೆ. ಕಾಲಾಯ ತಸ್ಮೈ ನಮಃ ..... ಯಾವಾಗ ಯಾರಿಗೆ ಹೇಗೆ ಸಮಯ ಕೂಡಿ ಬರುವುದೋ , ಅದ್ಯಾವ ಘಳಿಗೆಯಲಿ ಜೀವನಕ್ಕೆ ಒಂದೊಳ್ಳೆ ತಿರುವು  ಬರುವುದೋ  ಆಗಲೇ ಅವನ ಏಳಿಗೆ ಸಾಧ್ಯ ಅಲ್ಲವೇ. ಆ ಘಳಿಗೆ ಯಾವಾಗ ಬರುವುದೋ ಎನ್ನುವ ಭರವಸೆ ಯಲಿ ಮಾಡುವ ಕೆಲಸದಲ್ಲಿಯೇ ನಿರಂತರ ಕೃಷಿಯನ್ನ ತೊಡಗಿಸಿಕೊಂಡು ಜೀವನ ಸಾಗಿಸುತ್ತಿರುವೆನು.

                 ಹಣಕ್ಕೆ ಮಾರು ಹೋಗದಿರಿ , ಅನವಶ್ಯಕ ಹಣವನ್ನ ವೆಚ್ಚ ಮಾಡದಿರಿ .... ಕಲಿಯುಗದ ಕೇಸರಿ ದುಡ್ಡನ್ನು ಯಾವತ್ತು ಸುಲಭವಾಗಿ ನೋಡದಿರಿ ... ಮುತ್ತಿನಂಥ ಮಾತೊಂದ ಗೊತ್ತ ನಿಮಗೆ , ನಿಮ್ಮ ಜೀವನದಲ್ಲಿಯೂ ಸಹ ನೀವಂದುಕೊಂಡಂತೆ ನಡೆಯುವ ಕಾಲ ಬರಲಿದೆ. 

ಫಾಸ್ಟ್ ಟ್ಯಾಗ್ ಕಥೆ

ಕಳೆದ ಸಾಲಿನಲ್ಲಿ ಅಂದರೆ ೨೦೧೭-೧೮ ರಲ್ಲಿ ಅಗಸ್ಟ್ ತಿಂಗಳು ಮುಗಿತ ಬಂದಂತೆ ಭಾರತೀಯ ರಾಜ್ಯ ಹೆದ್ದಾರಿಯು FASTAG ಸೇವೆಯನ್ನು ಇಡೀ ದೇಶದಾದ್ಯಂತ ಪರಿಚಯಿಸಿತ್ತು. ಅದೇ ವೇಳೆ ನಾವು ಸಾಮಾನ್ಯ ಸೇವಾ ಕೇಂದ್ರದ ಸದಸ್ಯರಾಗಿದ್ದೆವು. ಅದರಲ್ಲಿ ಈ FASTAG ಸೇವೆಯನ್ನು ನಮಗೂ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. FASTAG ಅಂದರೆ  ಏನು ಎನ್ನುವುದರ ಕುರಿತು ನಾನು ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆ ಹಾಗಾಗಿ ನನಗೆ ಈ ಕೆಲಸ ಮಾಡಲು ಅನುಕೂಲವಾಯಿತು.

                  ಇನ್ನು FASTAG ಮಾರಾಟ ಮಾಡೋಕೆ ಅಂತ ಪಣ ತೊಟ್ಟು ನಿಂತೆವು. ಇದರಲ್ಲಿ ಹಲವಾರು ಜನರ ಕೈವಾಡ ವಿರಲಿಲ್ಲ ನಾನು ನನ್ನ ಗೆಳೆಯ ಕಿರಣ್ ಅಷ್ಟೇ ಇದ್ದದ್ದು. ಹೀಗೆ ಮೂರು ನಾಲ್ಕು ತಿಂಗಳು FASTAG ಉದ್ಯೋಗದಲ್ಲೇ ನಮ್ಮ ಜೀವನ  ಸಾಗ್ತಾ ಇತ್ತು. ಈಗಲೂ ಸಹ ಇನ್ನು ಅದೇ ಕೆಲಸದಲ್ಲಿ ಇರುವೆವು. ಸಂಪಾದನೆಗೆನು ಕಡಿಮೆ ಇಲ್ಲ . ನಾವೂ ಕಾಲೇಜು ಹುಡುಗರು ವಯಸ್ಸು ಅಬ್ಬಬ್ಬ ಅಂದರು ನಂಗೆ ಇಪ್ಪತ್ತು ವರ್ಷ ಕಿರಣ್ ಗೆ ಹತ್ತೊಂಬತ್ತು ವರ್ಷ ಅಷ್ಟೇ. ಆದರೆ ನಮ್ಮಿಬ್ಬರ ಒಂದು ದಿನದ ಸಂಪಾದನೆ ಸುಮಾರು ನಾಲ್ಕು ಸಾವಿರದಿಂದ ಐದು ಸಾವಿರದ ವರೆಗೆ ಇತ್ತು ಕೇವಲ ಒಂದು ದಿನಕ್ಕೆ. 

ಅವಳನ್ನು ಕಂಡರೆ

ಅವಳನ್ನು ಕಂಡರೆ ಏನೋ ಒಂಥರಾ ಮನದಲ್ಲೇ ಸಂತೋಷ , ರಾತ್ರಿಯೆಲ್ಲ ಅವಳದೇ ನೆನಪು , ಅವಳದೇ ಕನಸು... ಅವಳನ್ನು ಬಿಟ್ಟು ನಾನಿರುವೇನು ಎಂಬ ಕನಸು ಒಮ್ಮೆಯೂ ಕಂಡವನಲ್ಲ. ಅದೇನು ಮೋಡಿಯೋ ಅದೇನು ಛಾಯೆಯೋ ಅವಳದೆನು ಅಂತ ಸೌಂದರ್ಯವೋ ಯಾರನ್ನು ಕಂಡರೂ ನೋಡದ ನನ್ನ ಕಣ್ಣುಗಳು ಅವಳ ಹೆಸರು ಹೇಳುತಿದ್ದಂತೆ ಅವಳನ್ನ ಹುಡುಕಲು ಹಾತೊರೆಯುತ್ತೆ ನನ್ನ ಮನ. 

ಮೊದಲ ಬರಹ

ಈ ಬ್ಲಾಗಿನ ಮೊದಲ ಬರಹ .....

                                    ಏನಿಲ್ಲ ಸುಮ್ಮನೆ ತಮಾಷೆಗಂಥ ಈ ಬ್ಲಾಗನ್ನ ಬರೆದೆ. ಇದರಲ್ಲಿ ಅಂತ ವಿಶೇಷವೇನಿಲ್ಲ ನನ್ನ ವಿಚಾರಕ್ಕೆ ಬಂಧಂಥ ವಿಷಯಗಳನ್ನ ನಿಮ್ಮಂತಹ ಹವ್ಯಾಸಿ ಓದುಗರಿಗೆ ನನ್ನೆರಡು ಮಾತುಗಳ ಪರಿಚಯವಾಗಲಿ ಎನ್ನುವ ಉದ್ದೇಶ.