ಕಳೆದ ಸಾಲಿನಲ್ಲಿ ಅಂದರೆ ೨೦೧೭-೧೮ ರಲ್ಲಿ ಅಗಸ್ಟ್ ತಿಂಗಳು ಮುಗಿತ ಬಂದಂತೆ ಭಾರತೀಯ ರಾಜ್ಯ ಹೆದ್ದಾರಿಯು FASTAG ಸೇವೆಯನ್ನು ಇಡೀ ದೇಶದಾದ್ಯಂತ ಪರಿಚಯಿಸಿತ್ತು. ಅದೇ ವೇಳೆ ನಾವು ಸಾಮಾನ್ಯ ಸೇವಾ ಕೇಂದ್ರದ ಸದಸ್ಯರಾಗಿದ್ದೆವು. ಅದರಲ್ಲಿ ಈ FASTAG ಸೇವೆಯನ್ನು ನಮಗೂ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. FASTAG ಅಂದರೆ ಏನು ಎನ್ನುವುದರ ಕುರಿತು ನಾನು ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆ ಹಾಗಾಗಿ ನನಗೆ ಈ ಕೆಲಸ ಮಾಡಲು ಅನುಕೂಲವಾಯಿತು.
ಇನ್ನು FASTAG ಮಾರಾಟ ಮಾಡೋಕೆ ಅಂತ ಪಣ ತೊಟ್ಟು ನಿಂತೆವು. ಇದರಲ್ಲಿ ಹಲವಾರು ಜನರ ಕೈವಾಡ ವಿರಲಿಲ್ಲ ನಾನು ನನ್ನ ಗೆಳೆಯ ಕಿರಣ್ ಅಷ್ಟೇ ಇದ್ದದ್ದು. ಹೀಗೆ ಮೂರು ನಾಲ್ಕು ತಿಂಗಳು FASTAG ಉದ್ಯೋಗದಲ್ಲೇ ನಮ್ಮ ಜೀವನ ಸಾಗ್ತಾ ಇತ್ತು. ಈಗಲೂ ಸಹ ಇನ್ನು ಅದೇ ಕೆಲಸದಲ್ಲಿ ಇರುವೆವು. ಸಂಪಾದನೆಗೆನು ಕಡಿಮೆ ಇಲ್ಲ . ನಾವೂ ಕಾಲೇಜು ಹುಡುಗರು ವಯಸ್ಸು ಅಬ್ಬಬ್ಬ ಅಂದರು ನಂಗೆ ಇಪ್ಪತ್ತು ವರ್ಷ ಕಿರಣ್ ಗೆ ಹತ್ತೊಂಬತ್ತು ವರ್ಷ ಅಷ್ಟೇ. ಆದರೆ ನಮ್ಮಿಬ್ಬರ ಒಂದು ದಿನದ ಸಂಪಾದನೆ ಸುಮಾರು ನಾಲ್ಕು ಸಾವಿರದಿಂದ ಐದು ಸಾವಿರದ ವರೆಗೆ ಇತ್ತು ಕೇವಲ ಒಂದು ದಿನಕ್ಕೆ.