ನುಡಿದಂತೆ ನಡೆದಲ್ಲಿ

ಸುಮಾರು ಫೋನ್ ಕರೆಗಳು ಬರುತ್ತಲಿರುತ್ತವೆ , ಮತ್ತೊಂದು ಕೆಲಸದ ಗುಂಗಲ್ಲಿ  ಆಯಿತು ಸಾರ್ ಹತ್ತು ನಿಮಿಷದಲ್ಲಿ ನಿಮಗೆ ನಾನೇ ಕರೆ ಮಾಡುವೆ  ಅಂತ ಹೇಳುವೆ ಆದರೆ ಅದೇನು ಖರ್ಮವೋ ಈ ಬಾಯಿ ನುಡಿದಂತೆ ಕೈ ಕೆಲಸ ಮಾಡುವಿದಿಲ್ಲವಲ್ಲ ಎನ್ನುವುದೇ ಬೇಜಾರು . ಒತ್ತಡದ ಸಂಧಿಗ್ಧ ಸ್ಥಿತಿಯಲ್ಲಿರುವ ಎಲ್ಲರೂ ಹೀಗೆಯೋ ಏನೋ ನಾ ಕಾಣೆ ಆದರೆ ನಾನಂತು  ಹೇಳಿದ ಕೆಲಸ ಒಮ್ಮೆಗೆ ಮಾಡಿದವನು ಅಲ್ಲವೇ ಅಲ್ಲ. ಎರಡು ಬಾರಿಯಾದರೂ ಪುನರಾವರ್ತನೆ ಆಗಲೇಬೇಕು . ಆಗಲೇ ಅದು ನನ್ನ ವಿಚಾರಕ್ಕೆ ಬರುವಂಥದ್ದು. ಏನಿದು ಈ ಥರ ವಿಚಿತ್ರ  ಅನಿಸುತ್ತೆ ನನಗೆ ಯಾಕೆ ಹೀಗೆಲ್ಲ ಆಗಬೇಕು , ಯಾಕೆ ಇಷ್ಟೊಂದು ಒತ್ತಡದ ಜೀವನ ? ಅಂತ ಅನಿಸಿಬಿಡುತ್ತೆ . 

            ಕುಟುಂಬದ ಸಾಲಗಳು, ನನ್ನ ಜವಾಬ್ದಾರಿತನ , ನನ್ನ ಮೇಲಿನ ಹೊಣೆಗಾರಿಕೆಗಳನ್ನ ಕಡಿಮೆ ಮಾಡಲು ನನಗೆ ಹಣದ ಅವಶ್ಯಕತೆ ತುಂಬಾನೇ ಇದೆ ಹಾಗಾಗಿ ಈ ಒತ್ತಡ ಜೀವನ ನನಗೆ ಬೇಕೇ ಬೇಕು ......